Thread Rating:
  • 6 Vote(s) - 3.33 Average
  • 1
  • 2
  • 3
  • 4
  • 5
Adultery ನೀತು
#73
ಮಾರನೆಯ ದಿನ ನೀತು ಬೆಳಿಗ್ಗೆ ಎದ್ದಾಗ ನಿಶಾ ಇನ್ನೂ ಅವಳಪ್ಪನ ಎದೆಯ ಮೇಲೆ ಅರಾಮವಾಗಿ ನಿದ್ದೆ ಮಾಡುತ್ತಿರುವುದನ್ನು ಕಂಡು........ರೀ ಬೇಗ ಎದ್ದು ರೆಡಿಯಾಗಿ ಇವಳನ್ನು ಒಳಗೆ ಮಲಗಿಸ್ತೀನಿ ಎಷ್ಟು ಕೆಲಸವಿದೆ ನೀವೋ ಮಗಳ ಜೊತೆ ನಿದ್ದೆ ಮಾಡುತ್ತಿದ್ದೀರಲ್ಲ ಎಂದು ಮಗಳನ್ನೆತ್ತಿಕೊಂಡು ರೂಂ ಮಂಚದಲ್ಲಿ ಮಲಗಿಸಿದಳು. ಎಲ್ಲರೂ ರೆಡಿಯಾಗುವಷ್ಟರಲ್ಲೇ ಎಸೈ ಪರಿಚಯದ ಅಡುಗೆಯವರು ಬೆಳಿಗ್ಗಿನ ತಿಂಡಿಗಾಗಿ ಇಡ್ಲಿ....ಚಟ್ನಿ....ಸಾಂಬಾರ್ ಮತ್ತು ಕೇಸರಿಬಾತ್ ತಂದಿಟ್ಟು ಮಧ್ಯಾಹ್ನದ ಊಟವನ್ನು ಒಂದು ಘಂಟೆಗೆಲ್ಲಾ ತಲುಪಿಸುವುದಾಗಿ ಹೇಳಿಹೋದರು. ಪ್ರತಾಪ ಕೆಲಸದ ನಿಮಿತ್ತ ಸ್ವಲ್ಪ ತಡವಾಗಿ ಬರುವುದಾಗಿ ಹೇಳಿದಾಗ ಮಿಕ್ಕವರು ತಿಂಡಿಗೆ ಕುಳಿತರು. ಎಲ್ಲರೂ ತಿಂಡಿಯನ್ನು ಸೇವಿಸಿದಾಗ ಅಡುಗೆಯವರು ನಿಜಕ್ಕೂ ತುಂಬಾನೇ ರುಚಿಕರವಾಗಿ ಮಾಡಿರುವುದನ್ನು ತಿಳಿದು ಪ್ರತಾಪನನ್ನು ಹೊಗಳುತ್ತಿದ್ದರು. ನಿಶಾಳನ್ನು ಶಿಲಾ ರೆಡಿ ಮಾಡಿ ಕರೆತಂದಾಗ ಅವಳಿಬ್ಬರು ಅಣ್ಣಂದಿರು ಚಿಕ್ಕ ಚಿಕ್ಕ ಇಡ್ಲಿಯ ಪೀಸನ್ನು ತಂಗಿಗೆ ತಿನ್ನಿಸಿದ ಬಳಿಕ ರಶ್ಮಿ ಅವಳಿಗೆ ಕೇಸರಿಬಾತ್ ತಿನ್ನಿಸಿದಳು. ಯಾರೇ ನಿಶಾಳ ಮುಂದೆ ಇಡ್ಲಿ ಹಿಡಿದರೂ ಬೇಡವೆಂದು ತಲೆಯಾಡಿಸುತ್ತ ತನ್ನ ಕೈಯನ್ನು ಕೇಸರಿಬಾತಿನ ಕಡೆಗೇ ತೋರುತ್ತ ಅದನ್ನೇ ತಿನ್ನುತ್ತಿದ್ದಳು. ಅಶೋಕನ ಜೊತೆ ರವಿ...ಶೀಲಾ ಮತ್ತು ರಜನಿ ಮಾರ್ಕೆಟ್ಟಿಗೆ ಹೊರಟಾಗ ನೀತು ಅವರಿಗೆ ಮನೆಯ ಕೀಯೊಂದು ನೀಡಿ ನಾವು ಬರುವುದು ಸ್ವಲ್ಪ ತಡವಾದರೆ ನೀವು ಇಟ್ಟುಕೊಂಡಿರಿ ಪ್ರತಾಪ್ ಬಂದು ಮಕ್ಕಳನ್ನು ಕರೆದೊಯ್ಯುವಾಗ ಅವನಿಗೆ ಒಂದು ಕೀ ಕೊಟ್ಟು ಕಳಿಸುವೆ ಎಂದಳು.

    ಪ್ರತಾಪನೂ ಬಂದು ತಿಂಡಿ ಮುಗಿಸಿ ಕೆಲ ಹೊತ್ತು ಮಗುವಿನೊಂದಿಗೆ ಆಟವಾಡಿ ಮೂವರು ಮಕ್ಕಳನ್ನು ಕರೆದುಕೊಂಡು ಅಲಂಕಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ತರಲು ತೆರಳಿದರೆ ಹರೀಶ...ನೀತು ಮಗಳ ಜೊತೆ ಆ ಊರಿನಲ್ಲಿ ಪರಿಚಯದವರನ್ನೆಲ್ಲಾ ಆಮಂತ್ರಿಸಲು ಹೊರಟರು. ಮೊದಲಿಗೆ ಹರೀಶ ಶಾಲೆಯ ಎಲ್ಲಾ ಸಹೋಧ್ಯೋಗಿಗಳನ್ನು ಆಮಂತ್ರಿಸಿ ನಂತರ ತಾವು ಮೊದಲು ಬಾಡಿಗೆಗಿದ್ದ ಮನೆ ಮಾಲೀಕರು ಮತ್ತು ಅಕ್ಕ ಪಕ್ಕದ ಪರಿಚಯದವರನ್ನೆಲ್ಲಾ ಕರೆದರು. ಹೆಣ್ಣು ಮಗಳನ್ನು ದತ್ತು ಪಡೆದಿರುವ ವಿಷಯ ತಿಳಿದು ಎಲ್ಲರೂ ದಂಪತಿಗಳ ಕಾರ್ಯವನ್ನು ಹೋಗಳಿ ಶ್ಲಾಘಿಸಿದರೆ ಹರೀಶನ ಶಾಲೆಯ ಮುಖ್ಯೋಪಾಧ್ಯಾಯರು ತುಂಬಾ ಸಂತೋಷಪಟ್ಟು ತಮ್ಮ ಮಗಳಿಂದ ಮಗುವಿಗೆ ೫೦೦೧ ರೂಗಳನ್ನು ಕೊಡಸಿ ಹರಸಿ ಆಶೀರ್ವಧಿಸಿದರು. ಕೊನೆಯದಾಗಿ ಕಾಲೋನಿಯಲ್ಲಿ ಪರಿಚಯದವರನ್ನು ಆಹ್ವಾನಿಸಿ ಮನೆಯ ಕಡೆ ಹೇರಟರು.

    ಎಲ್ಲರನ್ನು ಆಹ್ವಾನಿಸಿ ಮನೆಗೆ ತಲುಪುವಷ್ಟರಲ್ಲಿ ಇನ್ನಿತರರೆಲ್ಲರೂ ಆಗಲೇ ಮನೆಗೆ ಬಂದಿದ್ದು ಮಕ್ಕಳಿಗೆ ಬೇಕಾದ ಅಲಂಕಾರದ ಪದಾರ್ಥಗಳನ್ನು ಕೊಡಿಸಿ ಪ್ರತಾಪ್ ಕೂಡ ಠಾಣೆಯ ಕೆಲಸದ ಮೇಲೆ ತೆರಳಿದ್ದನು. ರವಿ...ಅಶೋಕ...ಸುರೇಶ...ರಶ್ಮಿ...ರಜನಿ ಎಲ್ಲರೂ ಸೇರಿಕೊಂಡು ಗಿರೀಶನ ಕಲ್ಪನೆಗಳಿಗೆ ರೂಪ ನೀಡಲು ಅವನು ಹೇಳಿದಂತೆ ಅಲಂಕಾರಿಕ ಸಾಮಾಗ್ರಿಗಳನ್ನು ವ್ಯವಸ್ಥಿತವಾಗಿ ಜೋಡಿಸುತ್ತಿದ್ದರು. ಶೀಲಾ ಕೈಯಲ್ಲಿ ನಿಂಬೆಹಣ್ಣು ಮತ್ತು ಒಣ ಮೆಣಸಿನಕಾಯಿ ಹಿಡಿದು ಮಗುವಿಗೆ ದೃಷ್ಟಿ ತೆಗೆಯುತ್ತಿದ್ದರೆ ನಿಶಾಳ ಗಮನವೆಲ್ಲಾ ಅಲ್ಲಿ ಹರಡಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳ ಕಡೆಯೇ ಕೇಂದ್ರಿತವಾಗಿತ್ತು . ನೀತು ತೋಳಿನಿಂದ ಕೆಳಗಿಳಿದ ನಿಶಾ ನೇರವಾಗಿ ಬಣ್ಣ ಬಣ್ಣದ ಅಲಂಕಾರಿಕ ಸಾಮಾಗ್ರಿಗಳತ್ತ ಓಡಿ ಅದನ್ನೆತ್ತಿಕೊಳ್ಳಲು ಅವಳು ಪ್ರಯತ್ನಿಸುತ್ತಿದ್ದರೆ ಮಿಕ್ಕವರು ತಡೆಯುವ ಪ್ರಯತ್ನದಲ್ಲಿದ್ದರು. ಮಗಳನ್ನು ಸುಮ್ಮನೆ ಬಿಟ್ಟರೆ ಅವಳು ಕೆಲಸ ಮಾಡುವುದಕ್ಕೆ ಬಿಡಲಾರಳು ಎಂದರಿತ ನೀತು ಅವಳ ಕೈಗೆರಡು ಬೆಲೂನ್ ಮತ್ತು ಬಣ್ಣದ ಟೇಪುಗಳನ್ನು ನೀಡಿ ಮಡಿಲಿನಲ್ಲಿ ಮಲಗಿಸಿಕೊಂಡು ಆಡಿಸುತ್ತ ನಿದ್ದೆ ಮಾಡಿಸಿ ರೂಮಿಗೆ ಕರೆದೊಯ್ದು ಮಲಗಿಸಿಬಿಟ್ಟಳು.

    ಸಂಜೆತನಕ ಅಲಂಕಾರಕ್ಕೆ ಬೇಕಾದ್ದನ್ನೆಲ್ಲಾ ಸಿದ್ದಪಡಿಸಿ ರಾತ್ರಿಗೆ ಮನೆಯನ್ನು ಸಿಂಗರಿಸುವುದೆಂದು ಎಲ್ಲರು ತೀರ್ಮಾನಿಸಿ ಕಾಫಿ ಕುಡಿಯುತ್ತಿದ್ದಾಗ ಎಸೈ ಪ್ರತಾಪ್ ತನ್ನೊಂದಿಗೆ ವಿದ್ಯುತ್ ದೀಪಾಲಂಕಾರದವರನ್ನು ಕರೆ ತಂದಿದ್ದು ಅವರಿಗೆ ಇಡೀ ಮನೆಯನ್ನು ಝಗಮಗಗೊಳಿಸುವಂತೆ ಹೇಳಿದನು. ಎಸೈ ಪ್ರತಾಪ್ ಮನೆಯೊಳಗೆ ಬಂದು.........ಅಣ್ಣ ಎದುರುಗಡೆಯ ಖಾಲಿ ಸೈಟನ್ನು ಆಗಲೇ ಕ್ಲೀನ್ ಮಾಡಿಸಿದ್ದೆ ಈಗ ಬರುವವರಿಗೆ ಊಟ ಮತ್ತು ಕುಳಿತುಕೊಳ್ಳಲು ಅಲ್ಲೇ ಶಾಮಿಯಾನ ಹಾಕಿಸುತ್ತಿರುವೆ ಮನೆ ಪಕ್ಕದಲ್ಲಿ ಅಡುಗೆಯವರಿಗೂ ಕೂಡ ಶಾಮಿಯಾನ ಹಾಕುತ್ತಿದ್ದಾರೆ ಎಂದನು. ಹರೀಶ ಅವನ ಭುಜ ತಟ್ಟಿ........ನೀವೆಲ್ಲರೂ ಸೇರಿಕೊಂಡು ನನ್ನ ಹಲವು ವರ್ಷಗಳ ಕನಸನ್ನು ನಾನು ಯೋಚಿಸಿದ್ದಕ್ಕಿಂತಲೂ ಅಧ್ಬುತವಾಗಿ ಸಾಕಾರಗೊಳಿಸುತ್ತಿದ್ದರೆ ನಿಮಗೆ ಧನ್ಯವಾದ ಹೇಳಿ ಹೊರಗಿನವರಂತೆ ಕಾಣಲಾರೆ ಏಕೆಂದರೆ ಎಲ್ಲರೂ ಮನೆಯ ಸದಸ್ಯರಲ್ಲವಾ ಎಂದಾಗ ರವಿ....ಅಶೋಕ....ಪ್ರತಾಪ್ ಅವನನ್ನು ತಬ್ಬಿಕೊಂಡರು. ರಜನಿಯ ತಂದೆ ತಾಯಿಯನ್ನು ಹರೀಶ ಖುದ್ದಾಗಿ ಫೋನ್ ಮಾಡಿ ಆಹ್ವಾನಿಸಿದ್ದನು.

    ಸಂಜೆ ನಿಶಾ ಎಚ್ಚರಗೊಂಡು ತನ್ನ ಸುತ್ತಮುತ್ತ ಯಾರೂ ಇಲ್ಲದ್ದನ್ನು ನೋಡಿ ಭಯದಿಂದ ಇನ್ನೇನು ಅಳು ಪ್ರಾರಂಭಿಸುವಳು ಎಂಬಂತೆ ಮ್ಮ.....ಮ್ಮ.....ಮ್ಮ ಎಂದು ಕೂಗಿದೊಡನೆ ರೂಮಿಗೋಡಿದ ನೀತು ಮಗಳನ್ನ ಎತ್ತಿಕೊಂಡು ಓಲೈಸತೊಡಗಿದಳು. ರಾತ್ರಿಯವರೆಗೆ ಎಲ್ಲರೂ ಅಲಂಕಾರದ ಕೆಲಸಗಳಲ್ಲಿ ಮಗ್ನರಾಗಿದ್ದರೆ ನಿಶಾ ತನ್ನ ಕೈಲೊಂದು ಟೆಡ್ಡಿ ಹಿಡಿದು ಎಲ್ಲರ ಹತ್ತಿರವೂ ಹೋಗಿ ಅವರೇನು ಮಾಡುತ್ತಿದ್ದಾರೆಂದು ಕಣ್ಣರಳಿಸಿ ನೋಡುತ್ತಿದ್ದಳು. ಹರೀಶ ಮಗಳನ್ನೆತ್ತಿಕೊಂಡು ಹೊರಗೆ ಕರೆತಂದು ಮನೆಯ ಮೇಲೆಲ್ಲಾ ಅಳವಡಿಸಿರುವ ಝಗಮಗಿಸುವ ದೀಪಾಲಂಕಾರಗಳನ್ನು ತೋರಿದಾಗ ಅವಳು ಖುಷಿಯಿಂದ ಕುಣಿದಾಡುತ್ತ ಅಮ್ಮನನ್ನು ಕೂಗಿ ಕರೆದು ಅದರ ಕಡೆ ತೋರಿಸುತ್ತಿದ್ದಳು. ರಾತ್ರಿ ನೆಲದ ಮೇಲೆ ಹಾಸಿಗೆ ಹಾಸಿಕೊಂಡು ಮಲಗಿಕೊಂಡಿದ್ದ ಅಶೋಕನ ಎದೆಯನ್ನೇರಿದ ನಿಶಾ ಅಲ್ಲೇ ಮಲಗಿದಾಗ.........ಥ್ಯಾಂಕ್ಸ್ ದೇವರೆ ನೀತು ಕೊರಳಿಗೆ ಮಾಂಗಲ್ಯ ಕಟ್ಟಿದ್ದಕ್ಕೂ ಇಂದು ಸಾರ್ಥಕವಾಯಿತು ಎಂದುಕೊಂಡು ಮಗುವಿನ ಬೆನ್ನನ್ನು ಮೆಲ್ಲಗೆ ತಟ್ಟುತ್ತ ಅವಳೊಂದಿಗೆ ತಾನೂ ನಿದ್ರೆಗೆ ಜಾರಿದನು.

    ಬೆಳಿಗ್ಗೆ ನಾಲ್ಕಕ್ಕೇ ಎದ್ದು ಎಲ್ಲರೂ ರೆಡಿಯಾಗಿದ್ದರೂ ಸಮಯ ಐದಾದರೂ ಅಶೋಕ ಮಾತ್ರ ಮಗುವನ್ನು ಮಲಗಿಸಿಕೊಂಡು ಗಾಢ ನಿದ್ರೆಯಲ್ಲಿರುವುದನ್ನು ಕಂಡ ನೀತು ಮಗಳನ್ನೆತ್ತಿಕೊಂಡು ರೂಮಿನಲ್ಲಿ ಮಲಗಿಸಿ ಅಶೋಕನನ್ನು ಎಬ್ಬಿಸುತ್ತ...........ಎದ್ದೇಳಿ ಬೇಗ ರೆಡಿಯಾಗಿರಬೇಕೆಂದು ಗೊತ್ತಿಲ್ಲವ ಏಳು ಘಂಟೆಗೆ ಮಹಡಿ ಮನೆಯ ಗುದ್ದಲಿ ಪೂಜೆಗೆ ಮುಹೂರ್ತ ಎಂಬುದನ್ನು ಮರೆತರೆ ಹೇಗೆ ? ಅಶೋಕ ಸುತ್ತಲೂ ಯಾರಿಲ್ಲದ್ದನ್ನು ಗಮನಿಸಿ ನೀತು ತುಟಿಗೆ ಮುತ್ತಿಟ್ಟು.......ಮಗಳ ಜೊತೆ ಮಲಗಿದ್ದೆನಲ್ಲಾ ಟೈಮೇ ಗೊತ್ತಾಗಲಿಲ್ಲ ಅವಳಮ್ಮ ಇನ್ನೂ ಸಿಹಿಯಾಗುತ್ತಿದ್ದಾಳೆ ಎಂದು ನಗುತ್ತ ಸ್ನಾನಕ್ಕೆ ಹೊರಟರೆ ನೀತು ನಾಚಿಕೊಳ್ಳುತ್ತಿದ್ದಳು. ಎಸೈ ಪ್ರತಾಪ್ ಕೂಡ ರೆಡಿಯಾಗಿ ತನ್ನೊಂದಿಗೆ ನಾಲ್ಕು ದೊಡ್ಡದಾದ ದೀಪದ ಕಂಬಗಳನ್ನು ತಂದಿರುವುದನ್ನು ನೋಡಿದ ನೀತು ಅವನೊಂದಿಗೆ ಆಚರಿಸಿದ್ದ ಮಿಲನ ಮಹೋತ್ಸವವನ್ನು ನೆನೆಯುತ್ತ ಮುಸಿಮುಸಿ ನಗುತ್ತಿದ್ದಳು.

    ರಜನಿಯ ತಂದೆ ತಾಯಿ ಬಂದಾಗ ಅವರ ಆಶೀರ್ವಾದ ಪಡೆದ ನೀತು ಮಗಳನ್ನು ಎಚ್ಚರಗೊಳಿಸಿ ರೆಡಿ ಮಾಡಲು ಹೊರಟಾಗ ನಿಶಾಳನ್ನು ಕಸಿದುಕೊಂಡ ಶೀಲಾ ತಾನೇ ಅವಳಿಗೆ ಫ್ರೆಶ್ ಮಾಡಿಸಿದ ಬಳಿಕ ಸ್ನಾನ ಮಾಡಿಸಿ ಹಿಂದಿನ ದಿನ ತಂದಿದ್ದ ರೇಷ್ಮೆ ಲಂಗ ಬ್ಲೌಸನ್ನು ತೊಡಿಸಿ ಅಲಂಕಾರ ಮಾಡಿದಳು. ಆರ್ಕಿಟೆಕ್ಟ್ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಮಡದಿಯೊಂದಿಗೆ ಬಂದಿದ್ದು ಎಲ್ಲರಿಗೂ ಪರಿಚಯ ಮಾಡಿಸುತ್ತಿರುವಾಗ ಹರೀಶನ ಶಾಲೆಯ ಮುಖ್ಯೋಪಾಧ್ಯಾಯರೂ ತಮ್ಮ ಕುಟುಂಬದೊಂದಿಗೆ ಬೆಳಿಗ್ಗೆಯೇ ಆಗಮಿಸಿದ್ದರು. ದಂಪತಿಗಳು ಈ ಮುಂಚೆ ಬಾಡಿಗೆಗಿದ್ದ ಮನೆಯ ಓನರ್ ಸಪರಿವಾರ ಸಮೇತರಾಗಿ ಬಂದಿದ್ದು ಅವರ ಮಗ ಸೊಸೆ ಎಲ್ಲರನ್ನು ಬೇಟಿಯಾಗಿ ತಮ್ಮನ್ನೂ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಲು ತೊಡಗಿಸಿಕೊಂಡರು. ಹರೀಶ ಮತ್ತು ನೀತುವಿನ ಹುಟ್ಟೂರಿನಿಂದಲೂ ಮುಂಜಾನೆಯೇ ಪರಿಚಯದವರೆಲ್ಲಾ ಬಂದಿರುವುದನ್ನು ಕಂಡು ದಂಪತಿಗಳ ಆನಂದಕ್ಕೆ ಕೊನೆಯಿಲ್ಲದಂತಾಗಿತ್ತು . ರೇಷ್ಮೆ ಲಂಗ ಬ್ಲೌಸ್ ಧರಿಸಿ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದ ಮಗಳನ್ನೆತ್ತಿಕೊಂಡು ಮುದ್ದಾಡಿದ ಹರೀಶ ಅವಳನ್ನು ಎಲ್ಲರಿಗೂ ಪರಿಚಯ ಮಾಡಿಸುತ್ತಿದ್ದನು.

    ನೀತು ಹರೀಶರಿಗೆ ಆಶ್ಚರ್ಯವಾಗುವಂತೆ ಈ ಮನೆಯನ್ನು ಕಟ್ಟಿಸಿದ್ದು ಬಳಿಕ ನೀತುವಿಗೆ ಮಾರಾಟವನ್ನು ಮಾಡಿ ನೀತು ತಂದೆ ತಾಯಿಯರಂತೆ ಕಾಣುತ್ತಿದ್ದ ರಾಜೀವ್ ಮತ್ತು ರೇವತಿ ದಂಪತಿಗಳು ತಮ್ಮ ಇಬ್ಬರು ಮಕ್ಕಳು ಮತ್ತು ಸೊಸೆಯಂದಿರ ಜೊತೆ ವಿದೇಶದಿಂದ ಆಗಮಿಸಿದ್ದರು. ನೀತು ಕಣ್ಣೀರು ಸುರಿಸುತ್ತ ಅವರ ಕಾಲಿಗೆ ನಮಸ್ಕರಿಸಿದಾಗ ತಮ್ಮ ಮಾನಸ ಪುತ್ರಿಯನ್ನು ತಬ್ಬಿಕೊಂಡ ರಾಜೀವ್.........ನನ್ನ ಮಗಳ ಕಣ್ಣಲ್ಲಿ ಕಣ್ಣೀರು ಶೋಭೆ ತರುವುದಿಲ್ಲ ಅವಳು ಯಾವಾಗಲೂ ನಗುತ್ತಿದ್ದರೇ ಚೆನ್ನು . ನಮ್ಮ ಮೊಮ್ಮಗಳ ಪೂಜಾ ಕಾರ್ಯಕ್ಕೆ ಅಜ್ಜಿ ತಾತ ಬರದಿರಲು ಹೇಗೆ ತಾನೇ ಸಾಧ್ಯ ? ಅವರ ಮಡದಿ ರೇವತಿ ಗಂಡನನ್ನು ಪಕ್ಕಕ್ಕೆ ಸರಿಸಿ ನೀತುಳನ್ನು ಅಪ್ಪಿಕೊಂಡು...........ರೀ ನೀವು ಬಂದಾಗಲೆಲ್ಲಾ ನನ್ನ ಮಗಳನ್ನು ಅಳಿಸುತ್ತೀರ ಇಷ್ಟು ಖುಷಿಯ ಸಮಯದಲ್ಲೂ ನನ್ನ ಮಗಳ ಕಣ್ಣಲ್ಲಿ ನೀರು ತರಿಸಿದ್ದೀರಲ್ಲಾ ಎಂದು ಗಂಡನಿಗೆ ಗದರಿದರು. ನೀತು ಅವರನ್ನ ಗಟ್ಟಿಯಾಗಿ ಅಪ್ಪಿಕೊಂಡು........ಅಮ್ಮ ತಾಯಿಯ ಮಡಿಲಿನ ಅವಶ್ಯಕತೆ ನನಗೆ ಬಹಳ ಇತ್ತು ಇದು ಕೇವಲ ಸಂತೋಷದಿಂದ ಬಂದ ಕಣ್ಣೀರೆಂದಳು. ನೀತು ತನ್ನಿಬ್ಬರು ಅಣ್ಣಂದಿರಿಗೆ ನಮಸ್ಕರಿಸಲು ಹೋದಾಗ ಅವರು ತಂಗಿಯನ್ನು ತಡೆದು.........ತಂಗಿಯಾದವಳಿಗೆ ಅಣ್ಣಂದಿರ ಕಾಲಿನ ಬಳಿಯಲ್ಲ ಅವಳನ್ನು ತಲೆಯ ಮೇಲೆ ಹೊತ್ತುಕೊಳ್ಳುವವನೇ ನಿಜವಾದ ಅಣ್ಣ . ನಿನ್ನಷ್ಟು ಬುದ್ದಿ ನಮ್ಮಪ್ಪ ಅಮ್ಮನಗೆ ಇರಲಿಲ್ಲ ನೋಡು ನಾವು ಬೆಳೆದು ದೊಡ್ಡವರಾಗಿ ವಿದೇಶದಲ್ಲಿ ನೆಲೆಸಿದ ಬಳಿಕ ನಿನ್ನನ್ನು ಮಗಳಾಗಿ ಸ್ವೀಕರಿಸಿ ನಮಗೆ ತಂಗಿಯ ಪ್ರೀತಿ ದೊರಕಿಸಿಕೊಟ್ಟರು. ಇದೇ ಕೆಲಸವನ್ನು ಮುಂಚೆಯೇ ಮಾಡಿದ್ದರೆ ನಾವೂ ತಂಗಿಯನ್ನು ಹತಾಯಿಸುತ್ತ ನಮ್ಮ ಜೀವನದ ಸಂತೋಷದ ಕ್ಷಣಗಳನ್ನು ಕಳೆಯಬಹುದಿತ್ತು . ಈಗ ಎಲ್ಲರೂ ಬೆಳೆದು ವಯಸ್ಸಾಗಿರುವ ಸಮಯದಲ್ಲಿ ಚಿಕ್ಕವರಂತೆ ಆಡಲು ಸಾಧ್ಯವಾ ಎಂದು ನೀತುಳನ್ನು ಇಬ್ಬರು ಅಣ್ಣಂದಿರು ತಬ್ಬಿಕೊಂಡು ಹಣೆಗೆ ಮುತ್ತಿಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದವರನ್ನು ಪಕ್ಕಕ್ಕೆಳೆದ ಅವಳ ಹೆಂಡತಿಯರು ಒಟ್ಟಾಗಿಯೇ ನೀತುಳನ್ನು ಅಪ್ಪಿಕೊಂಡರು. ಅವರಲ್ಲೊಬ್ಬಳು.........ನೀತು ಬರೀ ನಿನ್ನದೇ ಧ್ಯಾನ ನಮ್ಮೆಲ್ಲರಿಗೂ ಮಕ್ಕಳು ಕೂಡ ಕೇಳುತ್ತಿದ್ದರು ನೀತು ಅತ್ತೆಯ ಮನೆಗೆ ನಾವೂ ಬರ್ತೀವಿ ಅಂತ ಆದರೆ ನಾಳೆಯಿಂದ ಅವರಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಕರೆತರಲಾಗಲಿಲ್ಲ . ಎಲ್ಲಿ ನಿನ್ನ ಗಂಡ ಹರೀಶ ಮಕ್ಕಳ್ಯಾರೂ ಕಾಣಿಸುತ್ತಿಲ್ಲ ನಮ್ಮ ಕುಟುಂಬದ ಪುಟ್ಟ ಸದಸ್ಯೆಯನ್ನು ನೋಡಲು ಕಾತುರದಿಂದ ಬಂದಿದ್ದೀವಿ ಎಂದಳು. ಮತ್ತೊಬ್ಬಳು......ಅಕ್ಕ ಅಲ್ಲಿ ನೋಡಿ ನಮ್ಮಿಬ್ಬರ ಯಜಮಾನರು ಹರೀಶರ ಜೊತೆ ಮಾತನಾಡಿ ತಮ್ಮ ಸೋದರ ಸೊಸೆಯನ್ನೆತ್ತಿ ಮುದ್ದಾಡುತ್ತಿದ್ದಾರೆ ನಾವಿಲ್ಲೇ ನಾದಿನಿಯ ಜೊತೆ ಹರಟೆಯಲ್ಲಿದ್ದೀವಿ ನಡೀರಿ ಎಂದು ಮಗುವಿನ ಬಳಿಗೆ ಎಳೆದೊಯ್ದಳು.

    ನೀತುವಿನ ತಂದೆ ತಾಯಿಯ ಸ್ಥಾನದಲ್ಲಿದ್ದ ದಂಪತಿಗಳ ಆಶೀರ್ವಾದ ಪಡೆದ ಹರೀಶ ಅವರ ಮಕ್ಕಳ ಜೊತೆ ಮಾತನಾಡುತ್ತ ಮಗಳನ್ನು ಅವರಿಗೊಪ್ಪಿಸಿದ್ದನು. ಶೀಲಾ ಮತ್ತು ರವಿಗೂ ಅವರ ಪರಿಚಯ ಮೊದಲೆ ಇದ್ದು ಅವರೂ ಕೂಡ ನೀತು ತಂದೆ ತಾಯಿಯರ ಆಶೀರ್ವಾದ ಪಡೆದು ಮಕ್ಕಳು ಸೊಸೆಯಂದಿರ ಜೊತೆ ಮಾತನಾಡತೊಡಗಿದರು. ನಿಶಾಳನ್ನು ಎತ್ತಿಕೊಳ್ಳಲು ಹೋದ ಗಂಡನನ್ನು ಪಕ್ಕಕ್ಕೆ ತಳ್ಳಿದ ರೇವತಿ.........ನನ್ನ ಮುದ್ದಿನ ಮೊಮ್ಮಗಳು ಎಲ್ಲಾ ನನ್ನಂತೆಯೇ ಎಂದು ಮುದ್ದಾಡುತ್ತಿದ್ದರೆ ಅವರ ಗಂಡ ರಾಜೀವ್........ಬೇಡ ಪುಟ್ಟಿ ನಿಮ್ಮಜ್ಜಿ ತರಹ ಮಾತ್ರ ಆಗಬೇಡ ನನ್ನ ಮಗಳು ನೀತು ತರಹವೇ ಆಗು ಎಂದು ಕಿಚಾಯಿಸುತ್ತಿದ್ದರು. ಸೊಸೆಯಂದಿರು ನೀತು ಮತ್ತು ನಿಶಾಳ ಕತ್ತಿಗೆ ಚಿನ್ನದ ನೆಕ್ಲೆಸ್ ಹಾಕಿ ಹರೀಶ...ಸುರೇಶ ಮತ್ತು ಗಿರೀಶನಿಗೆ ಬಟ್ಟೆಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ರಾಜೀವ್ ಮತ್ತು ರೇವತಿ ಹೇಳಿದಾಗ ಅವರ ಸೊಸೆಯರು ರವಿ ಮತ್ತು ಶೀಲಾ ದಂಪತಿಗೂ ಕಾಣಿಕೆಗಳನ್ನು ನೀಡಿದರು. ಅಶೋಕ....ರಜನಿಯನ್ನು ಹತ್ತಿರಕ್ಕೆ ಕರೆದು ಅವರ ಪರಿಚಯ ಹೇಳಿ ತಾವೇ ಮಾತನಾಡಿಸಿದಾಗ ಅವರಿಗೆಲ್ಲಾ ಆಶ್ಚರ್ಯವಾಯಿತು. ರಶ್ಮಿಯನ್ನು ತಮ್ಮ ಮಧ್ಯೆ ಕೂರಿಸಿಕೊಂಡ ದಂಪತಿಗಳು ತಮ್ಮ ಸೊಸೆಯಂದಿರ ಕೈಯಲ್ಲಿ ಅವಳ ಕತ್ತಿಗೂ ಚಿನ್ನದ ನೆಕ್ಲೆಸ್ ಹಾಕಿಸಿ....... ಮುಂದೆ ಈ ಮನೆ ಬೆಳಗಲು ಬರುವ ಮಹಾಲಕ್ಷ್ಮಿ ಕಣಮ್ಮ ನೀನು ಅದಕ್ಕೆ ಈ ಸಣ್ಣ ಉಡುಗೊರೆಯನ್ನು ನೀಡುತ್ತಿದ್ದೇವೆ. ಅಶೋಕ...ರಜನಿ ಮತ್ತವಳ ತಂದೆ ತಾಯಿ ಆಶ್ಚರ್ಯದಿಂದ ನೋಡುತ್ತಿರುವುದನ್ನು ಕಂಡು ರಾಜೀವ್...........ನಾವು ಹೆಸರಿಗೆ ಮಾತ್ರ ನೀತುವನ್ನು ನನ್ನ ಮಗಳೆಂದು ಕರೆಯುತ್ತೇವೆಂದು ತಿಳಿದಿದ್ದೀರಾ ಪ್ರತಿದಿನ ಅವಳೊಂದಿಗೆ ಮಾತನಾಡದಿದ್ದರೆ ನಮಗೆ ನಿದ್ದೆಯೇ ಬರಲ್ಲ ಗೊತ್ತ . ಇವಳು ಮಗಳಿಂದ ದೂರ ಆಗುವೆನೆಂಬ ಭಯದಲ್ಲಿ ಜ್ಞಾನತಪ್ಪಿದ್ದಾಗ ನನ್ನ ಹೆಂಡತಿ ಮತ್ತು ಹಿರಿಯ ಮಗನಿಗೂ ಆರೋಗ್ಯ ಹದಗೆಟ್ಟಿತ್ತು ಅಷ್ಟು ಆಪ್ಯಾಯತೆ ನಮ್ಮ ನಡುವೆ. ಇಲ್ಲಿನ ಪ್ರತಿಯೊಂದು ವಿಷಯವನ್ನು ನೀತು ನಮಗೆ ತಿಳಿಸದಿದ್ದರೆ ಇವಳ ಮನಸ್ಸಿಗೂ ಸಮಾಧಾನವಿಲ್ಲ . ನಿಮ್ಮೆಲ್ಲರ ಫೋಟೋಗಳನ್ನು ನೀತು ಮೊದಲೇ ನಮಗೆ ಕಳಿಸಿದ್ದು ಹಾಗಾಗಿ ನಿಮ್ಮನ್ನು ಬೇಟಿಯಾಗುವ ಮುನ್ನವೇ ನಿಮ್ಮೆಲ್ಲರ ಪರಿಚಯವು ನಮಗಿತ್ತು . ಹರೀಶ ಎಲ್ಲಿ ನಿನ್ನ ತಮ್ಮ ಪೋಲಿಸ್ ಎಂದು ಪ್ರತಾಪನನ್ನು ಕರೆದು ಅವನಿಗೂ ಆಶೀರ್ವಧಿಸಿ ಕಾಣಿಕೆ ನೀಡಿದಾಗ ಅವನಂತು ಜೋರಾಗಿ ಅಳುತ್ತ ಇಬ್ಬರನ್ನು ತಬ್ಬಿಕೊಂಡು ಬಿಟ್ಟನು. ನೀತು ತನ್ನ ತಂದೆ ತಾಯಿ ಅಣ್ಣ ಅತ್ತಿಗೆಯರನ್ನು ಅಲ್ಲಿ ಬಂದಿದ್ದ ಹತ್ತಿರದವರೆಲ್ಲರಿಗೂ ಪರಿಚಯಿಸುತ್ತಿದ್ದಾಗ ಪುರೋಹಿತರು ಗುದ್ದಲಿ ಪೂಜೆ ಮಾಡಲು ಕರೆದರು.

    ಹರೀಶ ಹೆಂಡತಿಗೆ ಸನ್ನೆ ಮಾಡಿದಾಗ ನೀತು.....ಪುರೋಹಿತರೇ ಗುದ್ದಲಿ ಪೂಜೆಯನ್ನು ನನ್ನ ತಂದೆ ತಾಯಿ ಅವರ ಮೊಮ್ಮಗಳ ಜೊತೆಗೂಡಿ ನೆರವೇರಿಸುತ್ತಾರೆ ಎಂದಾಗ ಎಲ್ಲರೂ ಅವಳತ್ತಲೇ ನೋಡುತ್ತಿದ್ದರು. ನೀತು.........ಈ ಮನೆ ಇವರ ಕನಸಿನ ಅರಮನೆಯಾಗಿತ್ತು ಮೊದಲ ಗುದ್ದಲಿ ಪೂಜೆಯನ್ನು ಇವರಿಬ್ಬರೇ ನೆರವೇರಿಸಿದ್ದು ಈಗಲೂ ಇವರಿಂದಲೇ ಶುಭಾರಂಭವಾಗಬೇಕೆಂದು ನಮ್ಮ ಆಸೆ ಎಂದಳು. ರೇವತಿ ಮತ್ತು ರಾಜೀವ್ ಹರೀಶ — ನೀತುಳನ್ನು ಆಶೀವರ್ಧಿಸಿ ಮೊಮ್ಮಗಳಾದ ನಿಶಾಳನ್ನು ತೊಡೆಯ ಮೇಲೆ ಕೂರಿಸಿ ಗುದ್ದಲಿ ಪೂಜೆ ನೆರವೇರಿಸಿದರು. ನೀತುವಿನ ಹಿರಿಯ ಸಹೋದರ ನಿಶಾಳ ಕೈಯಿಂದ ತೆಂಗಿನಕಾಯಿಯನ್ನು ಒಡೆಸಲು ಸಹಾಯ ಮಾಡಿ ಮನೆ ನಿರ್ಮಿಸುವ ಶುಭಕಾರ್ಯಕ್ಕೆ ಚಾಲನೆ ಕೊಟ್ಟನು. ನೀತುವಿನ ಅಣ್ಣ ಅತ್ತಿಗೆಯರು ಮನೆಯ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಆರ್ಕಿಟೆಕ್ಟ್ ರಮೇಶ ಮತ್ತವನ ಹೆಂಡತಿ ಇಬ್ಬರನ್ನು ಕೂರಿಸಿ ಅವರಿಗೆ ತಾಂಬೂಲದ ಜೊತೆ ಹದಿನೈದು ಲಕ್ಷಗಳ ಚೆಕ್ಕನ್ನೂ ನೀಡಿ ತಂಗಿಯ ಮನೆಯು ನಿರ್ವಿಜ್ಞವಾಗಿ ಸಮಾಪ್ತಿಯಾಗಲೆಂದು ಹಾರೈಸಿದರು. ಹರೀಶ ಅರ್ಕಿಟೆಕ್ಟಿಗೆ ಚೆಕ್ ಕೊಡುವುದನ್ನು ಬೇಡ ಎನ್ನಲು ಹೊರಟಾಗ ಅವನನ್ನು ತಡೆದ ಅಣ್ಣಂದಿರು........ಇದನ್ನು ನಾವು ನಿನಗೋ ಅಥವ ನಮ್ಮ ತಂಗಿಗೆ ಎಂದು ಕೊಡುತ್ತಿಲ್ಲ ನಮ್ಮ ಇಬ್ಬರು ಸೋದರ ಅಳಿಯಂದಿರು ಮತ್ತು ಮುದ್ದಾದ ಸೋದರ ಸೊಸೆಗಾಗಿಯೇ ಕೊಡುತ್ತಿರುವುದು ಮಿಕ್ಕಿದ್ದನ್ನು ನೀನೇ ಕೊಡುವಂತೆ ಆದರೆ ಮನೆ ಮಾತ್ರ ಗ್ರಾಂಡಾಗಿರಬೇಕು ಎಂದರು.

    ಕೆಲ ಹೊತ್ತಿನಲ್ಲೇ ಎಲ್ಲರೂ ತಿಂಡಿಗೆ ಕುಳಿತಾಗ ನಿಶಾ ಅಜ್ಜಿ ತಾತ ಮತ್ತು ಸೋದರ ಮಾವ ಅತ್ತೆಯಂದಿರ ಜೊತೆ ಬಿಟ್ಟು ಬರುವ ಮಾತೇ ಆಡುತ್ತಿರಲಿಲ್ಲ . ಅದನ್ನು ನೋಡಿ ರಾಜೀವ್........ನನ್ನ ಮೊಮ್ಮಗಳನ್ನೇ ಸ್ವಲ್ಪ ನೋಡಿ ಕಲಿತುಕೋ ನೀತು ಎಷ್ಟು ಬೇಗ ನಮ್ಮೆಲ್ಲರೊಡನೆ ಬೆರೆತಿದ್ದಾಳೆ. ನೀತು ನಿಜಕ್ಕೂ ನೀನು ತುಂಬಾನೇ ದೊಡ್ಡ ವ್ಯಕ್ತಿ ಕಣಮ್ಮ ವಿಶಾಲ ಮನಸ್ಸಿನವಳು ಅದಕ್ಕೆ ಇಬ್ಬರು ಗಂಡು ಮಕ್ಕಳಿದ್ದರೂ ಮಗಳನ್ನು ದತ್ತು ಸ್ವೀಕಾರ ಮಾಡಿ ಅವರಿಗೊಬ್ಬಳು ತಂಗಿಯನ್ನು ಕರೆತಂದಿರುವೆ. ನೀತು ತಂದೆಯನ್ನು ತಬ್ಬಿಕೊಂಡು......ಎಲ್ಲಾ ನೀವು ತೋರಿಸಿಕೊಟ್ಟಂತೆ ಅಲ್ಲವಾ ಅಪ್ಪ ನನಗೆ ನೀವು ಅಪ್ಪ ಅಮ್ಮ ಅಣ್ಣ ಅತ್ತಿಗೆಯರ ಮಮತೆಯ ಆಶ್ರಯ ಮತ್ತು ನನ್ನ ಸೋದರ ಸೊಸೆಯಂದಿರ ಪ್ರೀತಿ ಕೊಟ್ಟಿರುವಾಗ ನಿಮ್ಮ ಹಾದಿಯಲ್ಲೇ ನಡೆಯುವ ಸಣ್ಣ ಪ್ರಯತ್ನ ನನ್ನದು ಎಂದಳು. ತಂದೆ ತಾಯಿಯ ಆಶೀರ್ವಾದ ಪಡೆದು ನೀತು ಮತ್ತು ಹರೀಶ ಮಗಳ ಜೊತೆ ಅವಳ ಹೆಸರಿನಲ್ಲಿ ಮಾಡಿಸಬೇಕಿದ್ದ ಪೂಜೆಯನ್ನು ನಿರ್ವಿಜ್ಞವಾಗಿ ನೆರವೇರಿಸಿದರು. ಆಹ್ವಾನಿತರು ಮಗುವಿಗೆ ಆಶೀರ್ವಾದ ನೀಡಿ ಕಾಣಿಕೆಗಳನ್ನು ಕೊಟ್ಟು ಖುಷಿಖುಷಿಯಾಗಿ ಭೋಜನ ಸೇವಿಸಿದರು. ರವಿ.... ಅಶೋಕ....ರಜನಿ ಮತ್ತು ಶೀಲಾ ಹಿಂದಿನ ದಿನವೇ ತಂದಿದ್ದ ನೆನಪಿನ ಕಾಣಿಕೆಗಳನ್ನು ಬಂದಿದ್ದವರೆಲ್ಲರಿಗೂ ತಾಂಬೂಲದ ಜೊತೆ ನೀಡುತ್ತ ನೀತು ಮತ್ತು ಹರೀಶ ಎಲ್ಲರನ್ನು ಗೌರವದಿಂದ ಬೀಳ್ಕೊಟ್ಟರು. ರಜನಿಯ ತಂದೆ ತಾಯಿ ಕೂಡ ಮಗುವಿಗೆ ಆಶೀರ್ವಧಿಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ ಬಳಿಕ ಕೆಲಸ ಇರುವುದಾಗಿ ಹೇಳಿ ತಮ್ಮೂರಿಗೆ ಹೊರಟರು.

    ನೀತುವಿನ ಅಣ್ಣ ಅತ್ತಿಗೆಯರು ಮಕ್ಕಳ ಶಾಲಾ ಪರೀಕ್ಷೆ ಇರುವುದರಿಂದ ರಾತ್ರಿಯೇ ಸಿಂಗಾಪುರಕ್ಕೆ ತಮ್ಮ ಪ್ರಯಾಣ ಬೆಳೆಸುತ್ತಿದ್ದು........ಅಪ್ಪ ಅಮ್ಮ ಗುರುವಾರದ ತನಕ ಮಗಳ ಜೊತೆಗಿದ್ದು ಬರಲಿದ್ದಾರೆ ಮುಂದಿನ ಸಲ ಬಂದಾಗ ನಾವೂ ಹದಿನೈದು ದಿನಗಳ ಕಾಲ ತಂಗಿಯ ಮನೆಯಲ್ಲಿ ಠಿಕಾಣಿ ಹೊಡೆಯುವುದಾಗಿ ಹೇಳಿ ಎಲ್ಲರನ್ನು ನಗಿಸಿದರು. ನೀತು ಅಣ್ಣ ಅತ್ತಿಗೆಯರಿಗೆ ನಮಸ್ಕರಿಸಿದ ನಂತರ ಸುರೇಶ...ಗಿರೀಶ ಕೂಡ ಅವರ ಕಾಲಿಗೆ ನಮಸ್ಕರಿಸಿದರು. ನಿಶಾಳನ್ನು ಎತ್ತಿಕೊಂಡ ಹಿರಿಯಣ್ಣ ಅವಳ ಕೈಗೆ ಕವರೊಂದು ನೀಡಿ ಅಮ್ಮನಿಗೆ ಕೊಡುವಂತೆ ಹೇಳಿದನು. ನೀತು ಅದನ್ನು ತೆಗೆದು ಗಂಡನಿಗೆ ತೋರಿಸುತ್ತ.........ಅಣ್ಣ ಏನಿದು ಇಷ್ಟು ದೊಡ್ಡ ಮೊತ್ತದ ಚೆಕ್ ನೀವಿಬ್ಬರೂ ನನಗೆ ಅಣ್ಣಂದಿರ ಪ್ರೀತಿ ನೀಡುತ್ತಿರುವುದೇ ನನಗೆ ಜೀವಮಾನದ ಕಾಣಿಕೆ ನೀವು ಇಲ್ಲಿಗೆ ಬಂದಿದ್ದೇ ನನಗೆ ಅತ್ಯಂತ ಸಂತೋಷದ ವಿಷಯ ದಯವಿಟ್ಟು ಈ ಚೆಕ್ಕನ್ನು ಮರಳಿ ಪಡೆಯಿರಿ ಎಂದು ವಿನಂತಿಸಿಕೊಂಡಳು. ನೀತುವಿನ ಕೈ ಹಿಡಿದ ಅತ್ತಿಗೆಯರು......ಇದು ನಿನ್ನ ಅಣ್ಣಂದಿರು ಮತ್ತು ನಾವು ನಿನಗೆ ಕೊಡುತ್ತಿರುವುದಲ್ಲ ನಮ್ಮ ಮನೆಗೆ ಬಂದಿರುವ ಮುದ್ದಿನ ನಿಶಾ ಮತ್ತಿಬ್ಬರು ಸೋದರಳಿಯಂದಿರಿಗೆ ಕೊಡುತ್ತಿರುವುದು. ನಿನ್ನ ಅಣ್ಣ ಅತ್ತಿಗೆಯರು ಪ್ರೀತಿಯಿಂದ ಆಶೀರ್ವಧಿಸಿ ನೀಡಿರುವ ಕಾಣಿಕೆಯನ್ನು ನಿನಗೆ ತಿರಸ್ಕರಿಸುವ ಮನಸ್ಸಿದ್ದರೆ ವಾಪಸ್ ಕೊಟ್ಟುಬಿಡು ಆದರೆ ಇನ್ಮುಂದೆ ನಮ್ಮನ್ನು ಅಣ್ಣ ಅತ್ತಿಗೆ ಅಂತ ನೀನು ಕರೆಯುವ ಹಾಗಿಲ್ಲ ಅದನ್ನೂ ಹೇಳಿ ಬಿಡುತ್ತೇನೆ. ಈಗ ನಿರ್ಧಾರ ನಿನ್ನದು ನೀತು ಏನು ಮಾಡುವುದೆಂದು ನೀನೇ ಹೇಳು ಎಂದರು.

    ನೀತು ಗಂಡನ ಕಡೆ ನೋಡಿದಾಗ ಹರೀಶ ತಲೆ ಅಳ್ಳಾಡಿಸುತ್ತ........ನಿಮ್ಮ ಅಣ್ಣ ತಂಗಿಯ ಮಧ್ಯೆ ನನ್ನನ್ನು ಎಳೆಯಬೇಡ ನಾನೇನಿದ್ದರೂ ಅಮ್ಮಾವ್ರ ಗಂಡ ನೀನೇನು ಹೇಳ್ತಿಯೋ ಅದಕ್ಕೆ ತಲೆಯಾಡಿಸುವುದಷ್ಟೆ ನನ್ನ ಕೆಲಸ ಎಂದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದನು. ನೀತು ಅಪ್ಪ ಅಮ್ಮನ ಕಡೆ ನೋಡಿದಾಗ ನಿಶಾಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಗಳ ಉತ್ತರಕ್ಕಾಗಿ ಅವರೂ ಕಾದಿದ್ದರು. ನೀತು ಅಣ್ಣಂದಿರನ್ನು ತಬ್ಬಿ .........ನಿಮ್ಮನ್ನು ಅಣ್ಣ ಅತ್ತಿಗೆ ಎಂದು ಕರೆಯುವ ಅಧಿಕಾರ ಕಳೆದುಕೊಂಡ ದಿನವೇ ನನ್ನ ಜೀವನದ ಕೊನೇ ದಿನ ಅಣ್ಣ ಅದಕ್ಕಾಗಿ ಈ ಚೆಕ್ಕನ್ನು ಇಟ್ಟುಕೊಳ್ಳುವೆ ಆದರೆ ನೀವೆಲ್ಲರೂ ನನಗೊಂದು ಮಾತು ಕೊಡಬೇಕು. ಇನ್ಮುಂದೆ ಯಾವತ್ತಿಗೂ ನಮ್ಮನ್ನು ಅಣ್ಣ ಅತ್ತಿಗೆ ಎಂದು ಕರೆಯಬೇಡ ಎನ್ನುವ ಮಾತನ್ನು ಆಡಬಾರದು ಈ ನಿಮ್ಮ ತಂಗಿ ಅದನ್ನು ಸಹಿಸಿಕೊಳ್ಳಲಾರಳು ಎಂದವರನ್ನು ಅಪ್ಪಿಕೊಂಡು ಜೋರಾಗಿ ಅಳತೊಡಗಿದಳು. ಅತ್ತಿಗೆಯರು ತಾವಾಡಿದ ಮಾತಿಗೆ ಅವಳಲ್ಲಿ ಕ್ಷಮೆ ಕೇಳಿ ಅವಳನ್ನು ಸಮಾಧಾನಪಡಿಸಿ ಇನ್ನೆಂದೂ ಈ ರೀತಿ ಮಾತನಾಡುವುದಿಲ್ಲವೆಂದು ಹೇಳಿದರು. ಹಿರಿಯಣ್ಣ ತಂಗಿಯ ತಲೆ ಸವರಿ.......ನೋಡಮ್ಮ ಈ ಚೆಕ್ ನಾವು ನಮ್ಮ ಸೋದರ ಅಳಿಯಂದಿರು ಮತ್ತು ಸೋದರ ಸೊಸೆಗೆ ಕೊಟ್ಟಿದ್ದು . ಅದರಲ್ಲಿ ಗಿರೀಶ ಸುರೇಶ ಹೆಸರಲ್ಲಿ ೧೫ — ೧೫ ಲಕ್ಷಗಳನ್ನು ಡೆಪಾಸಿಟ್ ಇಟ್ಟು ಮಿಕ್ಕ ಇಪ್ಪತ್ತನ್ನು ನಿಶಾ ಹೆಸರಿನಲ್ಲಿಡು ಅದೇ ನಮ್ಮೆಲ್ಲರ ಆಸೆ ಆದರೆ ಅಪ್ಪ ಅಮ್ಮ ಏನು ಗಿಫ್ಟ್ ಕೊಡಲಿದ್ದಾರೆಂದು ನಮಗೂ ಕೂಡ ಗೊತ್ತಿಲ್ಲ ಅದು ನಿಮ್ಮ ವ್ಯವಹಾರ ಎಂದನು. ಎಲ್ಲರಿಂದ ಬೀಳ್ಗೊಳ್ಳುವ ಮುನ್ನ ನಿಶಾಳನ್ನು ತುಂಬ ಮುದ್ದಿಸಿ ಸುರೇಶ...ಗಿರೀಶ ಮತ್ತು ರಶ್ಮಿಗೆ ಆಶೀರ್ವಧಿಸಿ ಎಲ್ಲರನ್ನು ಮುಂದಿನ ರಜೆಯಲ್ಲಿ ಸಿಂಗಾಪುರಕ್ಕೆ ಬರಲೇಬೇಕೆಂದು ಆಹ್ವಾನಿಸಿ ತುಂಬಾ ಸಂತೋಷದಿಂದ ಹೊರಟರು.

    ನಿಶಾ ತಾತನ ತೊಡೆಯನ್ನೇರಿ ಅವರ ಜೇಬಿನೊಳಗೆ ಕೈ ಹಾಕಿ ಪಕ್ಕದಲ್ಲಿದ್ದ ಅಜ್ಜಿಗೆ ಏನೂ ಇಲ್ಲ ಎಂದು ತೋರಿಸುತ್ತಿದ್ದಳು. ರವಿ..........ಸರ್ ನಿಮ್ಮನ್ನು ಮತ್ತೊಮ್ಮೆ ಬೇಟಿಯಾಗಿದ್ದು ನಿಜಕ್ಕೂ ತುಂಬ ಸಂತೋಷ. ನೀತುಳನ್ನು ಸ್ವಂತ ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ನೀವು ನಿಜಕ್ಕೂ ಆದರ್ಶ ವ್ಯಕ್ತಿಗಳು ಎಂದನು.

    ರಾಜೀವ್ ಎಲ್ಲರನ್ನು ತಮ್ಮ ಸುತ್ತ ಕುಳಿತುಕೊಳ್ಳುವಂತೇಳಿ.........ನಿಮಗೆ ನಾವು ನೀತುಳನ್ನು ಮಗಳಾಗಿ ಹೇಗೆ ಸ್ವೀಕರಿಸಿದೆವು ಅಂತ ಗೊತ್ತಿಲ್ಲ ಅಲ್ಲವಾ ಎಂದಾಗ ರಜನಿ ತಮ್ಮೆಲ್ಲರಿಗೆ ನೀತು ಹೇಳಿದ್ದ ವಿಷಯವನ್ನು ತಿಳಿಸಿದಳು.

ರಾಜೀವ್ ಮತ್ತು ರೇವತಿ ನಗುತ್ತ.........ನೀತು ನಿಮ್ಮೆಲ್ಲರಿಗೂ ಒಂದು ಅಧ್ಬುತವಾದ ಕಥೆಯನ್ನೇ ಹೇಳಿದ್ದಾಳೆ ಅದರಲ್ಲಿ ಅರ್ಧ ನಿಜ ಇನ್ನರ್ಧ ಅವಳ ಕಲ್ಪನೆ. ನಾನು ನಿಮ್ಮೆಲ್ಲರಿಗೂ ನಮ್ಮ ಬೇಟಿಯ ನಿಜವಾದ ಕಥೆ ಹೇಳುವೆ ಎಂದವರನ್ನು ತಡೆಯುವ ಪ್ರಯತ್ನ ಮಾಡಿದ ನೀತುಳನ್ನು ತಾಯಿ ಬೈದು ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡರು. ತಾತನ ತೊಡೆ ಮೇಲೆ ಆಟವಾಡುತ್ತಿದ್ದ ನಿಶಾ ತೂಕಡಿಸಲು ಶುರುವಾದಾಗ ಅಜ್ಜಿ ತಮ್ಮ ಮಡಿಲಿನಲ್ಲಿ ಅವಳನ್ನು ಮಲಗಿಸಿಕೊಂಡರು.

ರಾಜೀವ್ ಮಾತು ಪ್ರಾರಂಭಿಸಿ.........ನೀತು ಹೇಳಿದಂತೆಯೇ ಈ ಮನೆ ಕಟ್ಟಿಸುತ್ತಿರುವಾಗ ಅವಳು ಕೂಡ ನೋಡಲು ಬಂದಿದ್ದಳು. ನೀತುವಿಗೆ ಮನೆ ಮಾರಾಟವಾಗುತ್ತಿರುವ ವಿಷಯ ಕೆಲಸಗಾರರಿಂದ ತಿಳಿದರೂ ಇದರ ಒವರ್ ಬಗ್ಗೆ ಅವಳಿಗೆ ತಿಳಿಯಲಿಲ್ಲ . ನೀತು ಮನೆಯ ಮೂಲೆ ಮೂಲೆಯನ್ನೂ ಸೂಕ್ಷ್ಮವಾಗಿಯೇ ನೋಡುತ್ತಿರುವುದನ್ನು ನಾನೊಬ್ಬನೇ ಅಲ್ಲ ನನ್ನ ಮಡದಿ ಇಬ್ಬರು ಮಕ್ಕಳು ಸೊಸೆಯಂದಿರು ಕೂಡ ಇವಳ ಕಡೆಯೇ ಗಮನಿಸುತ್ತಿದ್ದೆವು. ಅದೇ ಸಮಯಕ್ಕೆ ನನ್ನ ಕಿರಿಯ ಮಗ ಮೆಟ್ಟಿಲಿನಿಂದ ಕಾಲು ಜಾರಿ ಉರಿಳಿದ್ದು ತಲೆಗೆ ಪೆಟ್ಟಾಗಿ ಸಾಕಷ್ಟು ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡನು. ಅವನನ್ನು ನಾವು ಆಸ್ಪತ್ರೆಗೆ ಕರೆತಂದಾಗ ಅದೇಕೋ ಗೊತ್ತಿಲ್ಲ ನೀತು ಕೂಡ ನಮ್ಮ ಹಿಂದೆಯೇ ಬಂದಳು. ಡಾಕ್ಟರ್ ರಕ್ತದ ಅವಶ್ಯಕತೆಯಿದೆ ಎಂದು ಮಗನ ಬ್ಲಡ್ ಗ್ರೂಪ್ ಹೇಳಿದಾಕ್ಷಣ ನೀತು ಮೀಂದೆ ಬಂದು ನನ್ನದೂ ಅದೇ ಗ್ರೂಪ್ ನಾನು ಕೊಡ್ತಿನೆಂದು ರಕ್ತದಾನ ಮಾಡಿದಳು. ನಾವು ಇವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಗುರುತು ಪರಿಚಯವೇ ಇಲ್ಲದಿರುವ ನಮ್ಮ ಮಗನಿಗೆ ರಕ್ತದಾನ ಮಾಡಿದ ಬಗ್ಗೆ ವಿಚಾರಿಸಿದಾಗ ಹರೀಶ ನಿನ್ನ ಹೆಂಡತಿ ಏನೆಂದು ಉತ್ತರಿಸದಳು ಗೊತ್ತಾ ?.............

...........ಇನ್ನೊಬ್ಬರ ಪ್ರಾಣ ಕಾಪಾಡಲು ನಮ್ಮಿಂದ ಅಲ್ಪ ಸಹಾಯವಾದರೂ ಮಾಡಬಹುದು ಏನಿಸಿದರೆ ಮುಂದಿನ ವಿಷಯದ ಬಗ್ಗೆ ಚಿಂತಿಸದೆ ಮುನ್ನಡೆಯಬೇಕು ಎಂಬುದಷ್ಟೆ ನನಗೆ ಗೊತ್ತು . ನಿಮ್ಮ ಮಗನನ್ನು ನೋಡಿದರೆ ನನಗೊಬ್ಬ ಅಣ್ಣ ಇದ್ದಿದ್ದರೆ ಹೀಗೇ ಇರುತ್ತಿದ್ದನಲ್ಲಾ ಎನಿಸಿತು ಆದರೆ ರಕ್ತದಾನ ಮಾಡುವುದಕ್ಕೆ ಇನ್ನೊಂದು ಕಾರಣವಿದೆ. ನಿಮ್ಮ ಮಗ ಬಿದ್ದು ಗಾಯ ಮಾಡಿಕೊಂಡರಲ್ಲಾ ಆ ಮನೆಯನ್ನು ನೋಡಿದಾಗ ನನ್ನ ಗಂಡ ನಮ್ಮ ಸ್ವಂತ ಮನೆಯು ಹೇಗಿರಬೇಕೆಂದು ಕಲ್ಪಿಸಿಕೊಳ್ಳುವರೋ ಆ ಮನೆ ಕೂಡ ಹಾಗೇ ಇದೆ. ಅದಕ್ಕೆ ಅಲ್ಲಿನ ಕೆಲಸಗಾರರ ಬಳಿ ಮನೆ ಮಾಲೀಕರ ಬಗ್ಗೆ ವಿಚಾರಿಸಿದರೂ ತಿಳಿಯದಿದ್ದರೂ ಮನೆ ಆಗಲೇ ಮಾರಾಟವಾಗಿರುವ ಬಗ್ಗೆ ಹೇಳಿದರು. ಆ ಮನೆ ಮಾರಾಟಕ್ಕಿರುವ ಬಗ್ಗೆ ಮೊದಲೇ ತಿಳಿದಿದ್ದರೆ ನಾನು ಸಹ ಪ್ರಯತ್ನಿಸಬಹುದಿತ್ತು ಆದರೆ ಎಲ್ಲವೂ ದೈವೇಚ್ಚೆ ಬಿಡಿ. ಆ ಮನೆಯನ್ನು ನೋಡಿದಾಗ ನನ್ನ ಗಂಡನ ಕಲ್ಪನೆ ಸಾಕಾರಗೊಂಡಂತೆಯೇ ಕಾಣಿಸುತ್ತಿತ್ತು ಇನ್ನು ಅದೇ ಮನೆ ಮೆಟ್ಟಿಲಿನಿಂದ ಬಿದ್ದ ನಿಮ್ಮ ಮಗನಿಗೇನಾದರು ಹೆಚ್ಚು ಕಡಿಮೆ ಆಗಿದ್ದರೆ ಜನ ಆ ಮನೆಯ ಬಗ್ಗೆ ಅಪಶಕುನದ ಮಾತುಗಳನ್ನಾಡುತ್ತಿದ್ದರು ಅಲ್ಲವಾ. ಅವರ ಮಾತುಗಳು ಮನೆಯ ಬಗ್ಗೆ ಆಡುತ್ತಿದ್ದರೂ ಅದರಲ್ಲಿ ನನಗೆ ನನ್ನ ಗಂಡನ ಕಲ್ಪನೆಯನ್ನು ಜನ ಬೈಯುತ್ತಿದ್ದ ಹಾಗೆ ಕಂಡಿತು ಅದನ್ನೆಲ್ಲಾ ಸಹಿಸಲು ನನ್ನಿಂದ ಸಾಧ್ಯವಿಲ್ಲದೆ ನಾನು ರಕ್ತದಾನ ಮಾಡಿದೆ ಎಂದೇಳಿದಳು.

    ನನ್ನ ಇಡೀ ಕುಟುಂಬ ನೀತು ಮನಸ್ಸಿನಲ್ಲಿ ತನ್ನ ಗಂಡನ ಮೇಲಿಟ್ಟಿರುವ ಪ್ರೀತಿ...ಅವನ ಕಲ್ಪನೆಯ ಬಗ್ಗೆ ಇರುವ ಕಾಳಜಿ ಮತ್ತು ಮಗನಲ್ಲಿ ಅಣ್ಣನ ಛಾಯೆಯನ್ನು ನೋಡಿದ ನಿಶ್ಕಲ್ಮಶವಾದ ಹೃದಯಕ್ಕೆ ಆ ಕ್ಷಣವೇ ತಲೆ ಬಾಗಿದ್ದೆವು. ಹಿರಿ ಮಗ ತಕ್ಷಣವೇ ಈ ಮನೆಯನ್ನು ಖರೀಧಿಸುತ್ತಿದ್ದ ಅವನ ಸ್ನೇಹಿತನಿಗೆ ಕಾರಣಾಂತರ ಮನೆ ಮಾರುತ್ತಿಲ್ಲವೆಂದು ಹೇಳಿಬಿಟ್ಟನು. ನೀತುವಿಗೂ ನಾಳೆ ಅದೇ ಮನೆಯ ಹತ್ತಿರ ಬಾ ಅಲ್ಲಿಗೆ ಓನರ್ ಕೂಡ ಬರುತ್ತಾರೆ ಅವರು ಅಪ್ಪನಿಗೆ ತುಂಬ ಪರಿಚಯ ಇನ್ನೊಮ್ಮೆ ಪ್ರಯತ್ನಿಸೋಣ ಎಂದಾಗ ಇವಳ ಮುಖದಲ್ಲಿನ ಸಂತೋಷ ವರ್ಣಿಸಲು ಅಸಾಧ್ಯವಾಗಿತ್ತು . ನನ್ನ ಹಿರಿ ಮಗನೇ ಇವಳನ್ನು ಮನೆಗೆ ಬಿಟ್ಟು ಬಂದು ಏನಂದ ಗೊತ್ತ.............ಅಪ್ಪ ನಮಗೂ ಒಬ್ಬಳು ತಂಗಿ ಇದ್ದಿದ್ದರೆ ಇವಳಂತೆಯೇ ನಿಶ್ಕಲ್ಮಶವಾದ ಮನಸ್ಸಿನವಳಾಗಿ ಇರುತ್ತಿದ್ದಳು ಅಲ್ಲವಾ ಎಂದು ಕೇಳಿದ. ಹರೀಶನಂತೆಯೇ ಇಡೀ ಜೀವನ ಒಂದು ಹೆಣ್ಣು ಮಗುವಿಗಾಗಿ ಪರಿತಪಿಸುತ್ತಿದ್ದ ನನಗೆ ನೀತು ರೂಪದಲ್ಲಿ ಮಗಳು ದೊರಕಿದ್ದಳು.

   ಮಾರನೆಯ ದಿನ ನೀತು ಇದೇ ಮನೆ ಹತ್ತಿರ ಬಂದಾಗ ನಾನೇ ಇದರ ಮಾಲೀಕ ಮತ್ತು ಅವಳನ್ನು ಮಗಳ ರೂಪದಲ್ಲಿ ಸ್ವೀಕರಿಸುವ ಇಚ್ಚೆಯೂ ಹೊಂದಿದ್ದು ಈ ಮನೆಯನ್ನು ಮಗಳಿಗೆ ಕಾಣಿಕೆಯಾಗಿ ನೀಡಬೇಕೆಂದು ಯೋಚಿಸುತ್ತಿರುವ ವಿಷಯ ಅವಳಿಗೆ ತಿಳಿಯಿತು. ನೀತು ಏನಂದಳು ಎಂದರೆ............ನನಗೂ ತಾಯಿಯ ಮಡಿಲಿನಲ್ಲಿ ಮಲಗಿದ್ದ ನೆನೆಪೇ ಇಲ್ಲ....ತಂದೆಯ ಪ್ರೀತಿಯಿಂದಲೂ ವಂಚಿತಳಾಗಿಯೇ ಬೆಳೆದೆ. ತಾತ ಅಜ್ಜಿ ನನ್ನನ್ನು ತುಂಬ ಪ್ರೀತಿಸುತ್ತಿದ್ದು ಅವರ ಸಾವಿನ ನಂತರ ಗಂಡ ಹರೀಶನ ತಂದೆ ತಾಯಿಯರ ಶ್ರೀರಕ್ಷೆಯಲ್ಲಿ ಇದ್ದೆವಾದರೂ ಕೆಲವೇ ದಿನಗಳಲ್ಲಿ ಅವರು ನಮ್ಮನ್ನು ಒಂಟಿಯಾಗಿಸಿ ಹೊರಟು ಹೋದರು. ನಿಮ್ಮನ್ನು ನನ್ನ ತಂದೆ ತಾಯಿ ಅಣ್ಣ ಅತ್ತಿಗೆಯರ ಸ್ಥಾನದಲ್ಲಿ ಸ್ವೀಕರಿಸಲು ನನಗೂ ತುಂಬ ಇಷ್ಟವಾದದ್ದೆ ಆದರೆ ಮಗಳು ಅಂತ ಅಥವ ಅಣ್ಣನ ಪ್ರಾಣ ಉಳಿಸಿದ ತಂಗಿ ಅಂತಲೋ ಮನೆಯನ್ನು ಉಡುಗೊರೆಯಾಗಿ ಪಡೆಯಲು ನನ್ನ ಮತ್ತು ನನ್ನ ಗಂಡನ ಸ್ವಾಭಿಮಾನಕ್ಕೆ ವಿರುದ್ದ ಅದು ಮಾತ್ರ ಸ್ವೀಕೃತವಲ್ಲ . ಮದುವೆಯಾದಾಗಿನಿಂದ ನನ್ನ ಗಂಡ ತಂದು ನನ್ನ ಕೈಗಿಡುತ್ತಿದ್ದ ಸಂಬಳದಲ್ಲಿ ಅವರಿಗೂ ತಿಳಿಸದೆ ಅರ್ಧದಷ್ಟನ್ನು ಉಳಿತಾಯ ಮಾಡಿ ಬ್ಯಾಂಕಿನಲ್ಲಿ ಜಮಾ ಮಾಡುತ್ತಾ ಬಂದಿದ್ದೆ . ೯ — ೧೦ ವರ್ಷಗಳಲ್ಲಿ ಹತ್ತು ಲಕ್ಷಗಳವರೆಗೂ ಸೇರಿಸಿರುವೆ ಬಳಿಕ ಅವರ ಸಂಬಳ ಒಂದು ಲಕ್ಷದ ಸಮೀಪವಾದಾಗ ತಿಂಗಳಿಗೆ ೫೦೦೦೦ ರೂ ತನಕವೂ ಉಳಿತಾಯ ಮಾಡಿ ಈಗ ೩೯ — ೪೦ ಲಕ್ಷಗಳನ್ನು ಕೂಡಿಸಿಟ್ಟಿರುವುದಾಗಿ ತಿಳಿಸಿ ಅದೇ ಹಣದಲ್ಲಿ ಗಂಡನ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದಳು. ಮದುವೆಯಾದ ಸಮಯದಿಂದ ಇಲ್ಲಿಯತನಕ ಗಂಡ ನನ್ನ ಬಳಿ ಒಂದೇ ಒಂದು ರುಪಾಯಿಯ ಲೆಕ್ಕವನ್ನೂ ಸಹ ಕೇಳಿಲ್ಲ . ಅವರ ಊರಿನ ಮನೆ ಜಮೀನು ಮಾರಾಟವಾಗಿ ಬಂದ ಹಣದಲ್ಲಿ ಮನೆ ಖರೀಧಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದಾಗಲೂ ನಾನೇ ಬೇಡವೆಂದು ಅದನ್ನು ಫಿಕ್ಸೆಡ್ ಹಾಕಿಸಿದೆ ಇನ್ನು ನಿಮ್ಮಿಂದ ಮನೆಯನ್ನು ಉಡೊಗೊರೆಯಾಗಿ ಪಡೆಯುವ ಮಾತು ಹತ್ತಿರವೂ ಸುಳಿಯುವುದಿಲ್ಲ . ಮನೆ ಐವತ್ತು ಲಕ್ಷಕ್ಕೆ ಮಾರಾಟವಾಗುತ್ತಿರುವ ವಿಷಯ ಕೂಡ ನನಗೆ ತಿಳಿದಿದೆ ಆದರೆ ನನ್ನ ಉಳಿತಾಯ ಅದಕ್ಕಿಂತಲೂ ೧೦ — ೧೧ ಲಕ್ಷ ಕಡಿಮೆಯಿದೆ. ನೀವು ದಯವಿಟ್ಟು ಬೇರೆ ಯಾರಿಗಾದರೂ ಮನೆ ಮಾರಾಟ ಮಾಡಿಬಿಡಿ ತಂದೆ ತಾಯಿ ಅಣ್ಣ ಅತ್ತಿಗೆಯರ ಹಕ್ಕನ್ನು ಕಸಿದುಕೊಂಡು ನನ್ನ ಕನಸನ್ನು ಸಾಕಾರಗೊಳಿಸುವ ಅಭಿಲಾಷೆಯು ನನಗೆ ಖಂಡಿತವಾಗಿಯೂ ಇಲ್ಲ ಆದರೆ ಮನಸ್ಸಿನಿಂದ ನಿಮ್ಮನ್ನು ತಂದೆ ತಾಯಿಯ ಸ್ಥಾನದಲ್ಲಿ ನೋಡಲು ನಾನು ಸಿದ್ದ ಎಂದುಬಿಟ್ಟಳು.

    ನನ್ನ ಮಗ ಸೊಸೆಯಂದಿರು ನಾನಾ ಬಗೆಯಲ್ಲಿ ಹೇಳಿದರೂ ಕೇಳದೆ ನಾವೇ ಅವಳ ಮುಂದೆ ಶರಣಾಗಿ ಹಣ ಪಡೆದುಕೊಂಡೇ ಮನೆ ಮಾರಾಟ ಮಾಡಲು ಒಪ್ಪಿಕೊಳ್ಳಬೇಕಾಯಿತು. ನನ್ನ ಹೆಂಡತಿ ಮೂವತ್ತು ಲಕ್ಷ ಹಣವನ್ನು ಪಡೆದುಕೊಳ್ಳುತ್ತೇವೆಂದು ಹೇಳಿದಾಗಲೂ ಇವಳು ಮನೆಯ ನಿಜವಾದ ಬೆಲೆಗಿಂತ ಅರ್ಧ ಬೆಲೆಗೆ ಖರೀಧಿಸಲು ಒಪ್ಪುತ್ತಿರಲಿಲ್ಲ . ಕೊನೆಗೆ ನನ್ನ ಹೆಂಡತಿಯೇ ಇವಳಿಗೆ ಗದರಿ ಅಮ್ಮ ಹೇಳಿದ ಮಾತು ಮಗಳು ಕೇಳುತ್ತಿಲ್ಲವೆಂದರೆ ಮಗಳಿಗೆ ತಂದೆ ತಾಯಿಯ ಬಗ್ಗೆ ಪ್ರೀತಿ ಗೌರವ ಇಲ್ಲವೆಂದೇ ಅರ್ಥ ಎಂದು ತುಂಬಾ ಸೆಂಟಿಮೆಂಟಾಗಿ ಮಾತನಾಡಿ ಇವಳನ್ನು ಒಪ್ಪಿಸುವುದರೊಳಗೆ ನಾವೆಲ್ಲರೂ ಸುಸ್ತಾಗಿ ಹೋಗಿದ್ದೆವು. ನೀತು ಅಮ್ಮ ಎಂದು ನನ್ನ ಹೆಂಡತಿಯನ್ನು ತಬ್ಬಿಕೊಂಡಾಗ ಇವಳಿದಾಗ ಸಂತೋಷ ಹೇಳತೀರದು ಆದರೆ ನನ್ನ ಕಿರಿ ಮಗ ತಂಗಿಯನ್ನು ಪ್ರೀತಿಸುವಷ್ಟು ನಮ್ಮಿಂದಲೂ ಸಾಧ್ಯವಾಗುವುದಿಲ್ಲ ಅವನಿಗಂತು ಇವಳೆಂದರೆ ಪ್ರಾಣ. ಮನೆಯ ನೊಂದಣಿ ಮಾಡಿಸುವ ಮುಂಚೆಯೇ ತನ್ನ ಗಂಡ ಮಕ್ಕಳನ್ನು ಎಲ್ಲರಿಗೂ ಪರಿಚಯಿಸಿ ನಮ್ಮೆಲ್ಲರ ನಡುವೆ ಒಂದು ಬೇರ್ಪಡಿಸಲಾಗದ ಆಪ್ಯಾಯತೆಯ ಬಲೆ ಸುತ್ತಲೂ ಬೆಸೆದುಕೊಂಡಿತು. ನನ್ನ ಇಬ್ಬರು ಮೊಮ್ಮಕ್ಕಳಿಗೂ ಅವರ ಸೋದರತ್ತೆ ಎಂದರೆ ಬಹಳ ಪ್ರೀತಿ ಮತ್ತು ಗೌರವ ಮತ್ತು ಇಬ್ಬರಿಗೂ ಇವಳೇ ಆದರ್ಶ ವ್ಯಕ್ತಿ . 

    ಮನೆಯ ರಿಜಿಸ್ರ್ಟೇಷನ್ ಮುಗಿದ ನಂತರ ಗೃಹಪ್ರವೇಶದ ಪೂಜೆಗೂ ನಮ್ಮನ್ನೇ ಕೂರುವಂತೆ ಬಲವಂತ ಮಾಡಿ ನಮ್ಮಿಂದಲೇ ಶುಭಕಾರ್ಯ ಮಾಡಿಸಿದರು ಈ ವಿಷಯ ಶೀಲಾ ಮತ್ತು ರವಿಗೂ ಗೊತ್ತಿದೆ. ಆದರೆ ರಕ್ತದಾನ ಮಾಡಿ ನಮ್ಮೆಲ್ಲರ ಹೃದಯ ಗೆದ್ದಿದ್ದ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟು ನಮಗೂ ಹೇಳದಂತೆ ಎಚ್ಚರಿಸಿದ್ದಳು. ಅಂದಿನಿಂದ ಇಲ್ಲಿರವರೆಗೂ ಪ್ರತಿದಿನ ನನಗೂ ಇವಳಮ್ಮನಿಗೂ ಮಗಳ ಜೊತೆ ಮಾತು ಆಡದಿದ್ದರೆ ನಿದ್ದೆಯೇ ಬರುವುದಿಲ್ಲ . ಅಂದು ಆಶ್ರಮದಿಂದ ಹಿಂದಿರುಗಿ ಮನೆಯಲ್ಲಿ ಜ್ಞಾನತಪ್ಪಿದ ವಿಷಯ ಹರೀಶನಿಂದ ತಿಳಿದು ನನ್ನ ಹೆಂಡತಿ ಮತ್ತು ಕಿರಿ ಮಗನ ಆರೋಗ್ಯವೇ ಹದಗೆಟ್ಟಿತ್ತು . ಮಾರನೇ ದಿನವೇ ಇಲ್ಲಿಗೆ ಹೊರಡಲು ಸಿದ್ದರಾಗಿದ್ದಾಗ ಈ ನನ್ನ ಮಗಳೇ ಫೋನ್ ಮಾಡಿ ಮಗುವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿರುವ ವಿಷಯ ತಿಳಿಸಿದಾಗ ನಮಗೆ ಸಮಾಧಾನದ ಜೊತೆ ತುಂಬ ಸಂತೋಷವೂ ಆಯಿತು ಇವಳ ಅಣ್ಣ ಅತ್ತಿಗೆಯರೂ ವಾರದಲ್ಲಿ ಮೂರ್ನಾಲ್ಕು ಸಲ ಫೋನ್ ಮಾಡಿಮಾತಾಡುತ್ತಿರುತ್ತಾರೆ ಜೊತೆಗೆ ಹರೀಶ...ಗಿರೀಶ ಮತ್ತು ಸುರೇಶರ ಜೊತೆ ಕೂಡ. ಇನ್ನು ನಮ್ಮ ಇಬ್ಬರು ಹೆಣ್ಣು ಮೊಮ್ಮಕ್ಕಳಂತು ಅತ್ತೆ ಮಾವನ ಜೊತೆ ಪ್ರತೀ ಭಾನುವಾರ ಹರಟೆ ಹೊಡೆಯುವುದು ಸಾಮಾನ್ಯದ ಸಂಗತಿ. 

    ಈಗ ನೀತು ನಿನಗೂ ಸಹ ತಿಳಿಯದ ಇನ್ನೊಂದು ಮುಖ್ಯವಾದ ವಿಷಯ ಹೇಳುವೆ ಕೇಳು. ಈ ಮನೆಯ ಖರೀಧಿ ಸಮಯದಲ್ಲಿ ನಿಮ್ಮಿಬ್ಬರಿಂದ ಪಡೆದುಕೊಂಡ ಮೂವತ್ತು ಲಕ್ಷಗಳಲ್ಲಿ ಒಂದು ರುಪಾಯಿಯನ್ನೂ ಸಹ ಮುಟ್ಟಬಾರದೆಂದು ನಾವೆಲ್ಲರೂ ಒಟ್ಟಾಗಿ ನಿರ್ಧರಿಸಿದೆವು. ಅದನ್ನು ನನ್ನ ಸ್ನೇಹಿತನೊಬ್ಬ ನಡೆಸುವ ಅನಾಥಾಶ್ರಮಕ್ಕೆ ನಿನ್ನ ಹೆಸರಿನಲ್ಲಿ ದಾನವಾಗಿ ನೀಡುವ ತೀರ್ಮಾನ ತೆಗೆದುಕೊಂಡೆವು ಆ ಆಶ್ರಮವು ಯಾವುದೆಂದು ಗೊತ್ತ ? ಈ ನಮ್ಮ ಕುಟುಂಬದ ಕಿರಿಯ ಮತ್ತು ಅತ್ಯಂತ ಮುದ್ದಾದ ಮೊಮ್ಮಗಳನ್ನು ನೀನು ಮೊದಲ ಸಲ ಬೇಟಿ ಮಾಡಿದೆಯಲ್ಲಾ ಅದೇ ಆಶ್ರಮ. ದೇವರ ಆಟ ನೋಡು ನಾವು ನಿನ್ನ ಹೆಸರಿನಲ್ಲಿ ಯಾವ ಆಶ್ರಮದ ಮಕ್ಕಳಿಗೆ ಅನುಕೂಲವಾಗಲೆಂದು ಹಣ ದಾನ ಮಾಡಿದೆವೋ ಈಗ ನೀನು ಅದೇ ಆಶ್ರಮದ ಮಗುವನ್ನು ದತ್ತು ಸ್ವೀಕಾರ ಮಾಡಿ ಅವಳಿಗೆ ತಂದೆ ತಾಯಿ ಅಣ್ಣ ಅಜ್ಜಿ ತಾತ ಎಲ್ಲರ ಪ್ರೀತಿಯೂ ಸಿಗುವಂತೆ ಮಾಡಿರುವೆ. ನಿಜಕ್ಕೂ ಕಣಮ್ಮ ಸತ್ಯ ಹೇಳ್ತೀನಿ ನಿನ್ನಂತಹ ಒಳ್ಳೆಯ ಮನಸ್ಸಿನ ಛಲವಾದಿಯನ್ನು ಮಗಳಾಗಿ ಸ್ವೀಕರಿಸಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ನೀತುಳನ್ನು ತಬ್ಬಿಕೊಂಡು ಕಣ್ಣೀರನ್ನು ಸುರಿಸುತ್ತಿದ್ದರೆ ಅವಳು ಕೂಡ ತಂದೆಯ ಎದೆಯಲ್ಲಿ ಮುಖ ಹುದುಗಿಸಿ ಜೋರಾಗಿ ಅಳುತ್ತಿದ್ದಳು.


continue...........
Like Reply


Messages In This Thread
ನೀತು - by parishil7 - 19-03-2021, 07:19 PM
RE: ನೀತು - by sndp27 - 21-03-2021, 12:22 PM
RE: ನೀತು - by parishil7 - 22-03-2021, 03:27 PM
RE: ನೀತು - by parishil7 - 25-03-2021, 06:23 PM
RE: ನೀತು - by Donrenu - 28-03-2021, 06:52 PM
RE: ನೀತು - by Donrenu - 28-03-2021, 06:52 PM
RE: ನೀತು - by veenabhat - 29-03-2021, 10:38 PM
RE: ನೀತು - by parishil7 - 30-03-2021, 02:44 PM
RE: ನೀತು - by parishil7 - 11-04-2021, 09:50 PM
RE: ನೀತು - by parishil7 - 11-04-2021, 09:53 PM
RE: ನೀತು - by ravi gowda - 12-04-2021, 09:57 AM
RE: ನೀತು - by parishil7 - 13-04-2021, 02:00 PM
RE: ನೀತು - by Manu raj - 13-04-2021, 02:11 PM
RE: ನೀತು - by veenabhat - 14-04-2021, 09:02 PM
RE: ನೀತು - by parishil7 - 29-04-2021, 08:29 PM
RE: ನೀತು - by parishil7 - 29-04-2021, 08:31 PM
RE: ನೀತು - by Manu raj - 30-04-2021, 12:12 AM
RE: ನೀತು - by bharath1982 - 30-04-2021, 07:35 AM
RE: ನೀತು - by parishil7 - 11-05-2021, 07:20 AM
RE: ನೀತು - by parishil7 - 14-05-2021, 07:25 AM
RE: ನೀತು - by parishil7 - 14-05-2021, 07:26 AM
RE: ನೀತು - by Manu raj - 14-05-2021, 11:01 PM
RE: ನೀತು - by parishil7 - 15-05-2021, 11:44 AM
RE: ನೀತು - by parishil7 - 15-05-2021, 11:46 AM
RE: ನೀತು - by Manu raj - 15-05-2021, 10:38 PM
RE: ನೀತು - by parishil7 - 19-05-2021, 11:51 AM
RE: ನೀತು - by parishil7 - 19-05-2021, 11:53 AM
RE: ನೀತು - by parishil7 - 21-05-2021, 02:08 PM
RE: ನೀತು - by parishil7 - 21-05-2021, 02:10 PM
RE: ನೀತು - by parishil7 - 24-05-2021, 06:15 AM
RE: ನೀತು - by Tharanathj - 24-05-2021, 07:37 AM
RE: ನೀತು - by santhu304 - 24-05-2021, 10:36 AM
RE: ನೀತು - by parishil7 - 29-05-2021, 10:58 AM
RE: ನೀತು - by parishil7 - 29-05-2021, 10:59 AM
RE: ನೀತು - by parishil7 - 29-05-2021, 11:01 AM
RE: ನೀತು - by parishil7 - 30-05-2021, 07:49 PM
RE: ನೀತು - by parishil7 - 01-06-2021, 07:29 AM
RE: ನೀತು - by parishil7 - 01-06-2021, 07:31 AM
RE: ನೀತು - by parishil7 - 03-06-2021, 12:33 PM
RE: ನೀತು - by parishil7 - 03-06-2021, 12:35 PM
RE: ನೀತು - by parishil7 - 04-06-2021, 12:55 AM
RE: ನೀತು - by parishil7 - 04-06-2021, 12:58 AM
RE: ನೀತು - by parishil7 - 04-06-2021, 01:02 AM
RE: ನೀತು - by parishil7 - 05-06-2021, 07:13 AM
RE: ನೀತು - by parishil7 - 05-06-2021, 07:21 AM
RE: ನೀತು - by parishil7 - 08-06-2021, 08:50 AM
RE: ನೀತು - by parishil7 - 08-06-2021, 08:55 AM
RE: ನೀತು - by Navya gowda - 08-06-2021, 12:02 PM
RE: ನೀತು - by parishil7 - 08-06-2021, 01:13 PM
RE: ನೀತು - by parishil7 - 10-06-2021, 07:43 AM
RE: ನೀತು - by parishil7 - 10-06-2021, 07:44 AM
RE: ನೀತು - by parishil7 - 10-06-2021, 07:47 AM
RE: ನೀತು - by parishil7 - 10-06-2021, 07:52 AM
RE: ನೀತು - by parishil7 - 11-06-2021, 11:05 PM
RE: ನೀತು - by parishil7 - 11-06-2021, 11:07 PM
RE: ನೀತು - by parishil7 - 13-06-2021, 11:13 PM
RE: ನೀತು - by parishil7 - 13-06-2021, 11:22 PM
RE: ನೀತು - by parishil7 - 15-06-2021, 10:41 PM
RE: ನೀತು - by parishil7 - 15-06-2021, 10:42 PM
RE: ನೀತು - by parishil7 - 17-06-2021, 05:16 PM
RE: ನೀತು - by parishil7 - 19-06-2021, 08:35 AM
RE: ನೀತು - by parishil7 - 20-06-2021, 09:24 PM
RE: ನೀತು - by parishil7 - 20-06-2021, 09:28 PM
RE: ನೀತು - by parishil7 - 20-06-2021, 09:32 PM
RE: ನೀತು - by parishil7 - 20-06-2021, 09:39 PM
RE: ನೀತು - by parishil7 - 23-06-2021, 09:51 PM
RE: ನೀತು - by parishil7 - 23-06-2021, 09:58 PM
RE: ನೀತು - by parishil7 - 23-06-2021, 10:01 PM
RE: ನೀತು - by parishil7 - 01-07-2021, 06:54 AM
RE: ನೀತು - by parishil7 - 01-07-2021, 06:56 AM
RE: ನೀತು - by parishil7 - 01-07-2021, 06:58 AM
RE: ನೀತು - by parishil7 - 01-07-2021, 06:59 AM
RE: ನೀತು - by parishil7 - 01-07-2021, 07:00 AM
RE: ನೀತು - by parishil7 - 07-07-2021, 02:23 PM
RE: ನೀತು - by parishil7 - 07-07-2021, 02:25 PM
RE: ನೀತು - by parishil7 - 07-07-2021, 02:28 PM
RE: ನೀತು - by parishil7 - 07-07-2021, 02:31 PM
RE: ನೀತು - by Rajeshpalegar - 23-09-2021, 12:11 PM
RE: ನೀತು - by Nishales - 04-04-2022, 11:25 PM
RE: ನೀತು - by Visualprick12 - 01-07-2022, 11:47 PM
RE: ನೀತು - by Nishales - 17-01-2023, 12:37 AM



Users browsing this thread: 3 Guest(s)